ವಿಜಯಪುರ: ಮನೆಯ ಬೀಗ ಒಡೆದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರದ ಗ್ಯಾಂಗಬಾವಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಧುಸೂದನ್ ಉಪಾಧ್ಯೆ ಎಂಬುವರ ಮನೆಯಲ್ಲಿ ಕಳ್ಳರು 1.20 ಲಕ್ಷ ಮೌಲ್ಯದ 40 ಗ್ರಾಂ ಚಿನ್ನ ಹಾಗೂ 1400 ಮೌಲ್ಯದ ಬೆಳ್ಳಿ ಕಳ್ಳತನಗೈದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.