ವಿಜಯಪುರ: ಆನ್ಲೈನ್ ಪಾರ್ಟ್ ಟೈಮ್ ಜಾಬ್ನಲ್ಲಿ ಕಮಿಷನ್ ನೀಡುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ.
ಚೇತನ ಸರ್ದಾರ್ ಚವ್ಹಾಣ ಮೋಸ ಹೋದವರು. ಇನ್ನು ಟೆಲಿಗ್ರಾಂನಲ್ಲಿ ಆನ್ಲೈನ್ ಟೈಮ್ ಜಾಬ್ ಮಾಡಿ 15%, 30% ಕಮಿಷನ್ ಮೇಲೆ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 1.30 ಲಕ್ಷ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.