ವಿಜಯಪುರ : ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ 102.89 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಚುನಾವಣೆ ಆಯೋಗಕ್ಕೆ ಸಲ್ಲಿಸಿದ ದಾಖಲೆ ಪ್ರಕಾರ ಎಂ.ಬಿ.ಪಾಟೀಲ ಹೆಸರಲ್ಲಿ 97.22 ಲಕ್ಷ ರೂ. ಬೆಲೆಯ ಮರ್ಸಿಡಿಸ್ ಬೆಂಜ್, 1.50 ಕೋಟಿ ರೂ.ಬೆಲೆಯ ಬಿಎಂಡಬ್ಲು ಕಾರ್, ಹೂಡಿಕೆ, ವಿವಿಕಂಪನಿಗಳಲ್ಲಿ ಷೇರು ಖರೀದಿ ಸೇರಿದಂತೆ 8,59,69,928 ರೂ. ಮೌಲ್ಯದ ಚರಾಸ್ತಿ ಇದೆ. ಕೃಷಿ ಭೂಮಿ, ಬೆಂಗಳೂರು, ವಿಜಯಪುರದಲ್ಲಿ ವಸತಿ, ವಾಣಿಜ್ಯ ಕಟ್ಟಡ ಸೇರಿದಂತೆ 94,29,41,500 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಒಟ್ಟು 102,89,11,428 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಹಾಗೆಯೇ 34,26,50,980 ರೂ. ಸಾಲ ಪಡೆದಿದ್ದಾರೆ.
ಪತ್ನಿ ಆಶಾ ಪಾಟೀಲ ಹೆಸರಲ್ಲಿ 92.80 ಲಕ್ಷ ರೂ. ಬೆಲೆಯ 160 ತೊಲೆ ಬಂಗಾರ, ವಾಹನಗಳು, ಹೂಡಿಕೆ ಸೇರಿದಂತೆ 12,39,05,877 ರೂ. ಮೌಲ್ಯದ ಚರಾಸ್ತಿ ಹಾಗೂ ಹೊನಗನಹಳ್ಳಿಯಲ್ಲಿ ಕೃಷಿ ಭೂಮಿ, ಬೆಂಗಳೂರಿನಲ್ಲಿ ವಸತಿ ಕಟ್ಟಡ ಸೇರಿದಂತೆ 24,32,13,600 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇವರಿಗೆ ಒಟ್ಟು 36,71,19,477 ರೂ. ಮೌಲ್ಯದ ಆಸ್ತಿ ಇದೆ. 12,98,49,000 ರೂ. ಸಾಲ ಪಡೆದಿದ್ದಾರೆ. ಹಿರಿಯ ಪುತ್ರನ ಹೆಸರಲ್ಲಿ 1,12,68,980 ರೂ.ಮೌಲ್ಯದ ಹಾಗೂ ಕಿರಿಯ ಪುತ್ರನ ಹೆಸರಲ್ಲಿ 58,05,095 ರೂ. ಮೌಲ್ಯದ ಚರಾಸ್ತಿ ಇದೆ.