ಹುಬ್ಬಳ್ಳಿ: ಹೊಯ್ಸಳ ವಾಹನದ ಸಿಬ್ಬಂದಿ-ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ವಿವಿಧ ಪ್ರದೇಶ, ಹಾಗೂ ಶಾಲಾ ಕಾಲೇಜು ಗಳಿಗೆ ಭೇಟಿ ನೀಡಿ 112 ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ನಾಗರಿಕರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 112 ಸಹಾಯವಾಣಿ ಸ್ಪಂದನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಯಾವುದೇ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು. 112 ತುರ್ತು ಸಹಾಯವಾಣಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಮಯದಲ್ಲಿ ಪೋಲಿಸ ಅಧಿಕಾರಿಗಳು ಹಾಗೂ ಇತರೆ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.