ವಿಜಯಪುರ: ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲರಿಗೆ 14,45,79,554 ರೂ. ಮೌಲ್ಯದ ಆಸ್ತಿ ಇದೆ.
ವಿಜುಗೌಡ ಪಾಟೀಲ ಹೆಸರಲ್ಲಿ ವಾಹನ, 62 ಲಕ್ಷ ರೂ.ಬೆಲೆಯ ಬಂಗಾರ, ಹೂಡಿಕೆ ಸೇರಿದಂತೆ 5,79,29,554 ರೂ. ಮೌಲ್ಯದ ಚರಾಸ್ತಿ ಹಾಗೂ ಕೃಷಿ, ಕೃಷಿಯೇತರ ಭೂಮಿ ಸೇರಿದಂತೆ 8,66,50,000 ರೂ. ಮೌಲ್ಯದ ಸ್ಥಿರಾಸ್ತಿ ಇದೆ.
ಪತ್ನಿ ಹೆಸರಲ್ಲಿ 3.86 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 1.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.