ಹಾವೇರಿ: ಉಕ್ರೇನ್ನಲ್ಲಿ ಮೃತನಾದ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ 25 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯಲ್ಲಿರುವ ನವೀನ್ ಮನೆಗೆ ಭೇಟಿ ನೀಡಿ ಚೆಕ್ ನೀಡಿ, ಮೃತ ನವೀನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದಾರೆ. ಮೃತ ನವೀನ್ ತಂದೆ ಶೇಖರಗೌಡಗೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ನವೀನ್ ಮೃತದೇಹ ತರುವಂತೆ ಸಿಎಂಗೆ ಪೋಷಕರು, ಗ್ರಾಮಸ್ಥರು ಮನವಿ ಮಾಡಿದ್ದಾರೆ.