ವಿಜಯಪುರ: ಪಾಸ್ಪೋರ್ಟ್ ಹೆಸರಿನಲ್ಲಿ ಸಾವಿರಾರು ನಗದು ವಂಚನೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ನಡೆದಿದೆ. ವಸಂತಕುಮಾರಿ ಜೆ ಎಂಬುವರ ವಂಚನೆಗೆ ಒಳಗಾದವರು.
ಇನ್ನು ಆನ್ಲೈನ್ ಮೂಲಕ ಅನಾಮಧೇಯ ವ್ಯಕ್ತಿ ಕರೆ ಮಾಡಿ ನಿಮ್ಮ ಪಾಸ್ಪೋರ್ಟ್ ಕಳುಹಿಸಲಾಗುತ್ತಿದೆ. ಅದಕ್ಕಾಗಿ ನೀವು ಆನ್ಲೈನ್ ಮೂಲಕ 5 ನಗದು ಭರ್ತಿ ಮಾಡಬೇಕು ಎಂದು ಕರೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಐದು ರೂಪಾಯಿ ನಗದು ಕಟ್ಟಿದ್ಮೇಲೆ 20, 15 ಸಾವಿರ ಹೀಗೆ 99,703 ನಗದು ವಂಚನೆ ಮಾಡಿದ್ದಾರೆ. ಅದಕ್ಕಾಗಿ ಪತ್ತೆ ಮಾಡುವಂತೆ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.