ವಿಜಯಪುರ: ಆನ್ಲೈನ್ನಲ್ಲಿ(Online) ಪಾರ್ಟ್ ಟೈಮ್ ಜಾಬ್(Job) ನೀಡುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ(Money) ವಂಚನೆ ಮಾಡಿರುವ ಘಟನೆ ವಿಜಯಪುರದ ಸಾಯಿ ಪಾರ್ಕ್ನಲ್ಲಿ ನಡೆದಿದೆ. ಗಂಗಾಧರ ರೇವತಗಾಂವ ಮೋಸ ಹೋದವರು. ಇನ್ನು ಟೆಲಿಗ್ರಾಮ್ನಲ್ಲಿ ಲಿಂಕ್ ಕಳಿಸಿ ಹೋಟೆಲ್ಗಳಿಗೆ ರೇಟಿಂಗ್ ಕೊಡಿಸುವ ಆನ್ಲೈನ್ ಟೈಮ್ ಜಾಬ್ ಮಾಡಿ ಹೆಚ್ಚಿನ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 4 ಲಕ್ಷ 20 ಸಾವಿರ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.