ವಿಜಯಪುರ: ಫೇಸ್ಬುಕ್ ಫ್ರೆಂಡ್ ನಂಬಿ ವ್ಯಕ್ತಿ ಲಕ್ಷ ಲಕ್ಷ ನಗದು ಕಳೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಗಲೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಗಲೂರ ಗ್ರಾಮದ ನಿವಾಸಿ ಪರಮೇಶ ಹಿಪ್ಪರಗಿ ಮೋಸ ಹೋದವರು. ಇನ್ನು ಫೇಸ್ಬುಕ್ ಗೆಳತಿ ಹಾಗೂ ಹಾಸನ ನಿವಾಸಿ ಮಂಜುಳಾ ಕೆಆರ್ ಮೋಸಗೈದಿದ್ದಾರೆ. ಇನ್ನು ಮಂಜುಳಾ ಫೇಸ್ಬುಕ್ ಮೂಲಕ ಪರಮೇಶಗೆ ಫ್ರೆಂಡ್ ರಿಕ್ವೇಸ್ಟ್ ಕಳಿಸಿ ಸ್ನೇಹ ಬೆಳೆಸಿಕೊಂಡಿದ್ದಾಳೆ. ತದನಂತರ ಸಹಾಯಕ್ಕಾಗಿ 700 ನಗದು ಕೇಳಿದ್ದಾಳೆ. ನಂತರ ಹೀಗೆ ದಿನನಿತ್ಯ ಒಂದು ಸಾವಿರ ಸೇರಿದಂತೆ ಬರೋಬ್ಬರಿ 41.26 ಲಕ್ಷ ವಂಚನೆ ಮಾಡಿದ್ದಾಳೆ. ಅದಕ್ಕಾಗಿ ಮೋಸ ಹೋಗಿರುವ ಪರಮೇಶ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.