ವಿಜಯಪುರ: ಪತ್ರಾಸ್ ಶೆಡ್ಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಒಂದು ಮೇಕೆ, ನಗದು ಸಹಿತ ಅಪಾರ ಪ್ರಮಾಣದ ದವಸ ಧಾನ್ಯಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾದ ಬಿಕೆ ಗ್ರಾಮದಲ್ಲಿ ನಡೆದಿದೆ. ಪ್ರಭಾವತಿ ಜಾಧವ್ ಎಂಬುವರಿಗೆ ಸೇರಿದ ಶೆಡ್ಡ್ ಹಾನಿಯಾಗಿದೆ. ಅಲ್ಲದೇ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಐದು ಲಕ್ಷ ನಗದು, 4 ತೊಲಿ ಚಿನ್ನ ಸೇರಿದಂತೆ ಆಹಾರ ಧಾನ್ಯಗಳು ಭಸ್ಮವಾಗಿವೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.