ರಾಯಚೂರು: ಮಕ್ಕಳ ತಿಂಡಿ ಪ್ಯಾಕೆಟ್ನಲ್ಲಿ 500 ರೂ. ನೋಟ್ ಗಳು ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ನಡೆದಿದೆ.
ಕುರ್ಕುರಿ ತಿಂಡಿ ಪ್ಯಾಕೆಟ್ನಲ್ಲಿ ಪತ್ತೆಯಾದ ಗರಿಗರಿ ನೋಟ್ಗಳು ಸಿಕ್ಕಿವೆ. 5 ರೂ. ಪ್ಯಾಕೆಟ್ ನಲ್ಲಿ 500 ರೂಪಾಯಿಯ ಅಸಲಿ ನೋಟ್ ಗಳು ದೊರಕಿವೆ. ಮಾಕ್ಸ್ ವಿಟ್, ಪಂಜಾಬ್ ಸೇರಿದಂತೆ ವಿವಿಧ ಕಂಪನಿಯ ಕುರ್ಕುರಿ ತಿಂಡಿ ಜೊತೆಗೆ ಒಳಗಡೆ 500 ಮುಖಬೆಲೆಯ ನೋಟ್ ಗಳು ಸಿಕ್ಕಿವೆ. ಒಂದೇ ಪ್ಯಾಕೆಟ್ ಒಳಗಡೆ 5-6 ನೋಟ್ ಗಳು ಸಹ ಪತ್ತೆಯಾಗಿದ್ದು, ಅದಕ್ಕಾಗಿ
ಇನ್ನಷ್ಟು ಕುರ್ಕುರಿ ತರುವಂತೆ ಅಂಗಡಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.