K1N ಡೆಸ್ಕ್: ಭಾರತದಲ್ಲಿ ಇಂದು 5ಜಿ ತಂತ್ರಜ್ಞಾನವನ್ನು (5G Technology) ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. ಇಂದಿನಿಂದ ಭಾರತವು ಇಂಟರ್ನೆಟ್ನ 5G ಯುಗವನ್ನು ಪ್ರವೇಶಿಸಲಿದೆ. ಇದರಿಂದ ಜನರು ಎದುರಿಸುತ್ತಿರುವ ಇಂಟರ್ನೆಟ್ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಗಲಿದೆ.
ಬೆಂಗಳೂರು ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ ಆರಂಭವಾಗಲಿದ್ದು, ಈಗಾಗಲೇ ಬೆಂಗಳೂರಿನಲ್ಲಿ 5-G ಪ್ರಯೋಗ ನಡೆದಿದೆ. 13 ನಗರಗಳಲ್ಲಿ 5ಜಿ ಸೇವೆ ಸಿಗಲಿದ್ದು, ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5G ನೆಟ್ವರ್ಕ್ ಮೊದಲು ಬರಲಿದೆ.
5G ಉಪಯೋಗ…
5ಜಿ ಸೇವೆ ಸ್ಟಾರ್ಟ್ ಫೋನುಗಳು ದಕ್ಷತೆ, ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿಸುತ್ತದೆ.
ಆನ್ನೈನ್ ಗೇಮಿಂಗ್, ಸ್ವಯಂಚಾಲಿತ ಕಾರುಗಳ ನಿರ್ವಹಣೆ, ವಿಡಿಯೋ ಕಾನರೆನಿಂಗ್ ಮೊದಲಾದ ಡಿಜಿಟಲ್ ಅನುಭವ ಸುಧಾರಿಸುತ್ತದೆ.
ಇ- ಆರೋಗ್ಯ ಸೇವೆ, ಮೆಟಾವರ್ಸ್ ಅನುಭವಗಳು, ಅಡ್ವಾನ್ಸಡ್ ಮೊಬೈಲ್ ಕ್ರೌಡ್ ಗೇಮಿಂಗ್ಗೆ ನೆರವಾಗುತ್ತದೆ.
ಇದು ಬೌಂಡ್ಲೆಸ್ ಎಕ್ಸ್ ಟ್ರೇಮ್ ರಿಯಾಲಿಟಿ, ಲೋಕಲ್ ಇಂಟ ಆಕ್ಟಿವ್ ಕಂಟೆಂಟ್, ತಕ್ಷಣ ಕ್ಷೌಡ್ ಎಕ್ಸೆಸ್ ಸೇವೆಗಳನ್ನು ಒದಗಿಸುವ
ಸಾಮರ್ಥ್ಯ ಹೊಂದಿದೆ.
5ಜಿ ಪ್ರತಿ ಬಿಟ್ಗೆ ಕಡಿಮೆ ವೆಚ್ಚ ಹಾಗೂ ಹೆಚ್ಚು ಏಕರೂಪದ ಡೇಟಾ ವೆಚ್ಚವನ್ನು ಹೊಂದಿದೆ. ಇದು ಅಲ್ಪಾ ಹೈಸ್ಪೀಡ್ನಲ್ಲಿ ವಿಳಂಬ ಮುಕ್ತ ಸಂಪರ್ಕವನ್ನು ಬಳಕೆದಾರರಿಗೆ ಒದಗಿಸುತ್ತದೆ. ಅತ್ಯಧಿತ ಸಂಖ್ಯೆಯ ಬಳಕೆದಾರರಿಗೆ ಏಕರೂಪದ ಸೇವೆಯನ್ನು ಹಾಗೂ ಹೊಸ ಪೀಳಿಗೆ ಬಳಕೆದಾರರ ಅನುಭವವನ್ನು ತಲುಪಿಸುವ ಉದ್ದೇಶ ಹೊಂದಿದೆ.