ವಿಜಯಪುರ: ಆನ್ಲೈನ್ ಮೂಲಕ ರಿಲಯನ್ಸ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಲೋನ್ ನೀಡುವ ಆಮಿಷ ನೀಡಿ ಸಾವಿರಾರು ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರದ ಗಚ್ಚಿನಕಟ್ಟಿ ಕಾಲೋನಿಯಲ್ಲಿ ನಡೆದಿದೆ.
ಶ್ರೀಪಾಲ್ ರುಣವಾಲ್ ಮೋಸ ಹೋದವರು. ಫೇಸ್ಬುಕ್ ಸರ್ಚ್ ಮಾಡುವ ವೇಳೆಯಲ್ಲಿ ರಿಲಯನ್ಸ್ ಫೈನಾನ್ಸ್ ಲಿಮಿಟೆಡ್ ಲಿಂಕ್ ಓಪನ್ ಆಗಿದೆ. ಲೋನ್ ಬೇಕಿದ್ರೇ ಲಿಂಕ್ ಮಾಡುವಂತೆ ಹೇಳಿ 60,649 ನಗದು ಆನ್ಲೈನ್ ನಲ್ಲಿ ಮೋಸ ಮಾಡಿದ್ದಾರೆ. ಅದಕ್ಕಾಗಿ ಈ ಕುರಿತು ಶ್ರೀಪಾಲ್ ದೂರು ನೀಡಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.