ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಎಂಟು ಮತಕ್ಷೇತ್ರದಲ್ಲಿ ಉತ್ತಮ ಮತದಾನ ಆಗಿದೆ. ವಿಜಯಪುರ ಜಿಲ್ಲೆಯ 08 ವಿಧಾನಸಭಾ ಮತಕ್ಷೇತ್ರಗಳಾದ 26 – ಮುದ್ದೇಬಿಹಾಳ ಮತಕ್ಷೇತ್ರ 70.91%, 27- ದೇವರಹಿಪ್ಪರಗಿ ಮತಕ್ಷೇತ್ರ 65.81%, 28- ಬಸವನಬಾಗೇವಾಡಿ ಮತಕ್ಷೇತ್ರ 75.18%, 29- ಬಬಲೇಶ್ವರ ಮತಕ್ಷೇತ್ರ 81.79%, 30-ಬಿಜಾಪೂರ ನಗರ ಮತಕ್ಷೇತ್ರ 64.59%, 31-ನಾಗಠಾಣ ಮತಕ್ಷೇತ್ರ 66.48%, 32-ಇಂಡಿ ಮತಕ್ಷೇತ್ರ 73.62%, 33- ಸಿಂದಗಿ ಮತಕ್ಷೇತ್ರ 72.46 ಮತದಾನ ಪ್ರಮಾಣ ದಾಖಲು ಆಗಿದೆ. ಇನ್ನೂ ಜಿಲ್ಲಾದ್ಯಂತ ಎಂಟು ಮತಕ್ಷೇತ್ರದಲ್ಲಿ 71.01% ರಷ್ಟು ಮತದಾನ ಆಗಿದೆ.
![](https://karnataka1news.com/wp-content/uploads/2023/05/IMG-20230511-WA0017-1024x750.jpg)