ವಿಜಯಪುರ: ರಾಣಿ ಚೆನ್ನಮ್ಮ ವಿವಿಯ 8ನೇ ಅಂತರ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಆದ್ರೇ, ವಿಜಯಪುರ ಜಿಲ್ಲಾಡಳಿತ ಸ್ಪಂದನೆ ನೀಡಿಲ್ಲ. ಅದಕ್ಕಾಗಿ ಯಶಸ್ಸಿಗಾಗಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ ಜಾಧವ ಹೇಳಿದರು. ಆಗಷ್ಟ್ 5 ರಂದು ಸಂಜೆ 4ಕ್ಕೆ ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆ ನೆರವೇರಿಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಆದರೆ, ಜಿಲ್ಲಾಡಳಿತ ಸಂಪರ್ಕಿಸಲಾಗಿ ಬೇರೆ ಬೇರೆ ಕಾರಣಗಳಿಂದಾಗಿ ಸರಿಯಾಗಿ ಸ್ಪಂದಿಸಿಲ್ಲ. ಇನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ಕೂಡ ಸಮರ್ಪಕವಾಗಿ ಸ್ಪಂದಿಸದ ಕಾರಣ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ವಿವರಿಸಿದರಲ್ಲದೇ ಸದರಿ ಸುದ್ದಿಗೋಷ್ಠಿಯ ಖರ್ಚು ವೆಚ್ಚ ಸಹ ವೈಯಕ್ತಿಕವಾಗಿ ನಿಭಾಯಿಸುವುದಾಗಿ ಅಶೋಕ ಜಾಧವ ತಿಳಿಸಿದರು. ಡಾ.ಆರ್.ಎಸ್. ಕಲ್ಲೂರಮಠ, ಎಸ್.ಜಿ. ಮಠ, ಫಯಾಜ್ ಕಲಾದಗಿ ಹಾಗೂ ಇತರು ಉಪಸ್ಥಿತರಿದ್ದರು.