ವಿಜಯಪುರ: ಕಳ್ಳರು ಕೈಚಳಕ ತೋರಿಸಿ ಲಕ್ಷಾಂತರ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ. ಶಿವಲಿಂಗೇಶ್ವರ ಅಡತಿ ಎಂಬುವರಿಗೆ ಸೇರಿದ ಚೆನ್ನಯ್ಯ ಸಾರಂಗಮಠ ದಿವ್ಯಜ್ಯೋತಿ ಟೆಂಡರ್ಸ್ ಅಂಗಡಿಯ ಕೀಲಿಯನ್ನು ಕಳ್ಳರು ಒಡೆದಿದ್ದಾರೆ. ಅಂಗಡಿಯಲ್ಲಿದ್ದ 3.40 ಲಕ್ಷ ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.