ವಿಜಯಪುರ: ಯುವಕನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಬಸವನಹಟ್ಟಿಯ ತಂಗುದಾಣದಲ್ಲಿ ನಡೆದಿದೆ.
ಬಸವನಬಾಗೇಬಾಡಿ ಪಟ್ಟಣದ ಮುತ್ತು ದುಂಬಾಳಿ ಮೃತ ದುರ್ದೈವಿ. ಇನ್ನು ಮುತ್ತುನ್ನು ಕಲ್ಲಿನಿಂದ ಜಜ್ಜಿ, ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಸವಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.