ವಿಜಯಪುರ: ಭೀಮಾತೀರ ಖ್ಯಾತಿಯ ಆಲಮೇಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಪ್ರದೀಪ ಎಂಟಮಾನ್ನ್ನು ಎಂದು ಮೇಲಿನಮನಿ ಎಂಬ ಎದುರಾಳಿ ಕುಟುಂಬಸ್ಥರು ಕೊಲೆಗೈದಿದ್ದರು. ಇದೀಗ್ ಆ ಕೊಲೆಯ ಬಳಿಕ ಎಂಟಮಾನ್ ಕುಟುಂಬಸ್ಥರ ಮಧ್ಯೆ ಆಸ್ತಿಗಾಗಿ ಕಲಹ ಆರಂಭವಾಗಿದೆ. ಹತ್ಯೆಯಾಗಿರುವ ಪ್ರದೀಪ ಎಂಟಮಾನನ ಎರಡನೇ ಪತ್ನಿ ಗೀತಾ ಹಾಗೂ ಪ್ರದೀಪನ ಸಹೋದರಿ, ಸಹೋದರಿಯರ ಮದ್ಯೆ ಗಲಾಟೆಗಳು ಶುರುವಾಗಿವೆ. ಪ್ರದೀಪ ಯಂಟಮಾನ್ ಕೊಲೆಯಾದ ಬಳಿಕ ಅವರ ಮನೆಯವರು ಆಸ್ತಿಗಾಗಿ ನನ್ನ ಮೇಲೆ ಹಲ್ಲೆ, ಜೀವ ತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗೀತಾ ಗಂಭೀರ ಆರೋಪ ಮಾಡಿದ್ದಾಳೆ.
ಅಲ್ಲದೇ, ಆಲಮೇಲ ಪಟ್ಟಣದಲ್ಲಿರುವ ಮನೆ, ಅಂಗಡಿಗಳು, ವಿಜಯಪುರದಲ್ಲಿನ ಮನೆ, ಎಂಟು ಎಕರೆ ಜಮೀನು ಸೇರಿದಂತೆ ಇತರೇ ಆಸ್ತಿಗಳೆಲ್ಲವೂ ನಾನು ಹಾಗೂ ಪ್ರದೀಪ ದುಡಿದು ಗಳಿಸಿದ್ದೇವೆ. ಆದ್ರೇ, ಎಂಟಮಾನ್ ಕುಟುಂಬ್ಥರ ಕಣ್ಣು ಆಸ್ತಿ ಮೇಲೆ ಬಿದ್ದಿದೆ. ನನ್ನ ಮಗನಿಗೆ ಜೀವ ಬೆದರಿಕೆ ಇದೆ. ದಯಮಾಡಿ ಪೊಲೀಸರು ನನಗೆ, ನನ್ನ ಮಗನಿಗೆ ರಕ್ಷಣೆ ಒದಗಿಸಬೇಕು ಎಂದರು. ಆದ್ರೇ, ಇದಕ್ಕೆ ಪ್ರತಿಕ್ರಿಯಿಸಿರುವ ಪ್ರದೀಪ್ ಎಂಟಮಾನ್ ಸಹೋದರ ರಾಘವೇಂದ್ರ, ನಾವು ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ. ಅವಳಿಗೆ ಯಾವುದೇ ರೀತಿಯ ಬೆದರಿಕೆಯೂ ಹಾಕಿಲ್ಲ ಎಂದರು. ಗೀತಾ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರದೀಪನ ಕುಟುಂಬಸ್ಥರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಪ್ರದೀಪನ ಆಸ್ತಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ನಮಗೆ ಬೇಕಾಗಿಲ್ಲ. ಎಲ್ಲವನ್ನೂ ಆತನ ಮಗನ ಹೆಸರಿಗೆ ಮಾಡಬೇಕು ಎಂಬುದು ಅಷ್ಟೆ ನಮ್ಮ ಒತ್ತಾಯ ಎಂದು ಪ್ರದೀಪನ ಕುಟುಂಬಸ್ಥರು ಹೇಳಿದರು.