ಧಾರವಾಡ: ಫೇಡಾನಗರಿಯಲ್ಲಿ ಪತ್ನಿ ಹತ್ಯೆಗೈದು ತದನಂತರ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಹೊರವಲಯದ ಗಣೇಶನಗರದ ಗಳವಿ ದಡ್ಡಿಯಲ್ಲಿ ನಡೆದಿದೆ.
ಚಟ್ಟು ಗದಗವಾಲೆ ಆತ್ಮಹತ್ಯೆ ಮಾಡಿಕೊಂಡ ಪತಿ. ಇನ್ನೂ ಮನೀಷಾ ಕೊಲೆಯಾದ ಪತ್ನಿಯಾಗಿದ್ದಾಳೆ. ಅಲ್ಲದೇ, ಗಂಡ ಹೆಂಡತಿ ಕಳೆದ ನಾಲ್ಕು ತಿಂಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೇ, ಕಳೆದ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಅದಕ್ಕಾಗಿ ರಾತ್ರಿ ಪತ್ನಿಯ ಕೊಲೆ ಮಾಡಿ, ನಂತರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.