ವಿಜಯಪುರ: ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ್ ನನಗೆ ಕೆಲಸ ಮಾಡಲು ನೀಡುತ್ತಿಲ್ಲ. ಅವರ ವರ್ತನೆಗೆ ಬೇಸತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ನಗರದಲ್ಲಿ ಬಿಜೆಪಿಯ ಸಹ ವಕ್ತಾರ ರವೀಂದ್ರ ಲೋಣಿ ಹೇಳಿದರು.
ಬಿಜೆಪಿಯ ಸಹ ವಕ್ತಾರನಾಗಿ ಕಳೆದ ಒಂದು ವರ್ಷದಿಂದ ಅನೇಕ ಜನಪರ ಕೆಲಸ ಕಾರ್ಯ ಮಾಡಿದ್ದೇನೆ. ಆದ್ರೇ, ಕೂಚಬಾಳ್ ಸಮರ್ಪಕವಾಗಿ ಸ್ಪಂದಿಸಲಿಲ್ಲ. ಜಿಲ್ಲೆಯ ಶಾಸಕರು ಅನೇಕ ಅಭಿವೃದ್ಧಿ ಪರ ಕಾರ್ಯ ಮಾಡಿದರೂ ಅದನ್ನು ತಿಳಿಸುವ ಪ್ರಯತ್ನ ನಡೆದಿಲ್ಲ ಎಂದರು.