ವಿಜಯಪುರ: ಕಳ್ಳರು ತಮ್ಮ ಕೈಚಳಕ ತೋರಿಸಿ ಪಾನ್ ಶಾಪ್ ಅಂಗಡಿಯಲ್ಲಿ ಕಳ್ಳತನಗೈದಿರುವ ಘಟನೆ ವಿಜಯಪುರ ನಗರದ ಗೋದಾವರಿ ಸರ್ಕಲ್ ನಲ್ಲಿ ನಡೆದಿದೆ.
ರಾಜು ಚಂದುಕರ್ ಎಂಬುವವರ ಪಾನ್ ಶಾಪ್ ಅಂಗಡಿಯಲ್ಲಿ ಮೇಲ್ಛಾವಣಿ ಕತ್ತರಿಸಿ ಕಳ್ಳರು ನಗದು ಹಾಗೂ ಸಾವಿರಾರು ಮೌಲ್ಯದ ಸಾಮಗ್ರಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.