ವಿಜಯಪುರ: ಮೂರು ಅಡಿ ಜಾಗಕ್ಕಾಗಿ ಪುರಸಭೆ ಸದಸ್ಯನ ಮೇಲೆ 11 ಜನರು ಬಡಿಗೆಯಿಂದ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಶಬೀರ್ ಖಾಜಿ ಹಲ್ಲೆಗೊಳಗಾದ ಇಂಡಿ ವಾರ್ಡ್ ನಂಬರ 15 ಪುರಸಭೆ ಸದಸ್ಯ. ಇನ್ನು ಎಂಬಿ ಮಾಣಿಕ ಹಾಗೂ ಸಹಚರರು ಹಲ್ಲೆಗೈದಿರುವವರು. ಇನ್ನು ಮನೆ ಪಕ್ಕದ ಜಾಗಕ್ಕಾಗಿ ಮಾತಿಗೆ ಮಾತು ಬೆಳೆದು ಮಾಣಿಕ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆಗೈದಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಹಲ್ಲೆಗೊಳಗಾದ ಪುರಸಭೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.