ವಿಜಯಪುರ: ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದಿಂದ ಕೆಜಿಎಫ್ 2 ಸಿನೇಮಾ ಬಿಡುಗಡೆ ಹಿನ್ನಲೆ ಬೈಕ್ ರ್ಯಾಲಿಯನ್ನು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಮಾಡಿದರು.
ಇನ್ನು ಸಿದ್ಧೇಶ್ವರ ದೇವಸ್ಥಾನದಿಂದ ಶಿವಾಜಿ ಸರ್ಕಲ್ ನಂತರ ವಿವಿಧ ಬಡಾವಣೆಯಲ್ಲಿ ಬೈಕ್ ರ್ಯಾಲಿ ಮಾಡಿದರು. ಅಲ್ಲದೇ, ಕೆಜಿಎಫ್ 2 ಸಿನೇಮಾ ಯಶಸ್ವಿಯಾಗಿ ಎಲ್ಲ ಸಿನೇಮಾ ದಾಖಲೆಗಳು ಮುರಿಯಬೇಕು. ಇನ್ನು ರಾಕಿಂಗ್ ಯಶ್ ಯಶ್ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಈ ವೇಳೆಯಲ್ಲಿ ಯಶ್ ಅಭಿಮಾನಿಗಳು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.