ವಿಜಯಪುರ: ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿರುವ ಘಟನೆ ವಿಜಯಪುರ ನಗರದ ಪೊಲೀಸ ಪರೇಡ್ ಮೈದಾನದ ಬಳಿ ನಡೆದಿದೆ. ಆಟೋ ಚಾಲಕ ಸೇರಿ ಆರು ಜನರಿಗೆ ಗಾಯಗೊಂಡಿದ್ದಾರೆ. ಅಲ್ಲದೇ, ಮೂವರ ಸ್ಥಿತಿ ಗಂಭೀರವಾಗಿದೆ. ಪೊಲೀಸ ತರಬೇತಿ ಕೇಂದ್ರದ ಆವರಣದಲ್ಲಿದ್ದ ಮರ ಬಿದ್ದು ಈ ಅವಘಡ ಸಂಭವಿಸಿದೆ. ಇನ್ನು ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಗಾಂಧಿ ಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ