ವಿಜಯನಗರ: ಎಸಿ ಸ್ಫೋಟದಿಂದ ಒಂದೇ ಕುಟುಂಬದ ನಾಲ್ವರು ಅಸುನೀಗಿರುವ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಎಸಿ ಸ್ಪೋಟಗೊಂಡಿದೆ.
ಈ ಘಟನೆ ಶ್ರೀರಾಘವೇಂದ್ರ ಶೆಟ್ಟಿ ಮನೆಯಲ್ಲಿ ದುರಂತ ನಡೆದಿದ್ದು, ಎಸಿ ಲೀಕ್ನಿಂದ ಬೆಂಕಿ ಹೊತ್ತುಕೊಂಡಿದೆ. ಇದರಿಂದಾಗಿ 42 ವರ್ಷದ ವೆಂಕಟ್ ಪ್ರಶಾಂತ್, 38 ವರ್ಷದ ಚಂದ್ರಕಲಾ ಮಕ್ಕಳಾದ 16 ವರ್ಷದ ಅರ್ದ್ವಿಕ್, 8 ವರ್ಷದ ಪ್ರೇರಣಾ ಸಾವನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.