ವಿಜಯಪುರ: ಮುಂದಿನ ಸಿಎಂ ನಾನೇ ಎಂದು ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗ್ತೇನಿ ಎಂದು ಸಿಎಂ ಬೊಮ್ಮಾಯಿ ಕುರ್ಚಿಯ ಮೇಲೆ ಯತ್ನಾಳ ಕಣ್ಣಿಟ್ಟಿದ್ದಾರೆ. ಯಾಕೇ ನಾನು ಸಿಎಂ ಆಗಬಾರದಾ..? ಸಿಎಂ ಆಗುವ ಅರ್ಹತೆ ನನಗೆ ಇದೆ. ನನ್ಮೇಲೆ ಗಣಿ, ಅಕ್ರಮ ಆಸ್ತಿ, ಜಾತಿ ಆರೋಪ ಇಲ್ಲ ಎಂದರು. ಇನ್ನು ಪ್ರಧಾನಿ ಮೋದಿ ಮನಸ್ಸು ಮಾಡಿದ್ರೇ ನಾನೇ ಸಿಎಂ. ಅಲ್ಲದೇ, 130 ಸೀಟ್ ತರುವ ತಾಕತ್ತು ನನಗೆ ಇದೆ. ಹೈಕಮಾಂಡ್ ನೇತೃತ್ವ ನೀಡಿದ್ರೆ ನಾನು ಚುನಾವಣೆ ಹೊಣೆ ಹೊರುತ್ತೇನೆ ಎಂದರು.