ವಿಜಯಪುರ: ವಿಜಯಪುರ ನಗರದ ಟೆಕ್ಕೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.
ಕಳೆದ ನಾಲ್ಕು ದಿನದ ಹಿಂದೆ ನಿತಿನ್ ಗವಾಯಿ ಎಂಬುವರ ಕಾರಿನಲ್ಲಿ ಇಟ್ಟಿದ್ದ 3 ಲಕ್ಷ ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದರು. ಇದೀಗ ಕಳ್ಳತನದ ಸಿಸಿಟಿವಿಯ ವಿಡಿಯೋ ಲಭ್ಯವಾಗಿದೆ. ಇನ್ನು ವಿಡಿಯೋ ಹೋಟೆಲ್ನಲ್ಲಿರುವ ಸಿಸಿಟಿವಿಯಲ್ಲಿ ಕಳ್ಳನೋರ್ವ ಕಾರಿನ ಒಳಗೆ ನುಗ್ಗಿ ಹಣ ದೋಚಿಕೊಂಡು ಹೋಗುವ ವಿಡಿಯೋ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.