ವಿಜಯಪುರ: ಗುತ್ತಿಗೆದಾರರ ಸಂತೋಷ ಆತ್ಮಹತ್ಯೆ ಕೇಸ್ನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿಜಯಪುರದ ಗಾಂಧಿಚೌಕ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂತೋಷ ಪಾಟೀಲ ಸಾವಿಗೆ ಕಾರಣಾಗಿರುವ ಈಶ್ವರಪ್ಪರನ್ನು ಪೊಲೀಸ ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಈಶ್ವರಪ್ಪ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅದಕ್ಕಾಗಿ ತಕ್ಷಣವೇ ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಧಾರ್ಮಿಕ ವಿಷಯ ಬಂದಾಗ ಸಮಾಧಾನದಿಂದ ಇರಬೇಕು. ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಧಾರ್ಮಿಕ ವಿಚಾರಗಳಲ್ಲಿ ಸಾಕಷ್ಟು ಫೇಕ್ ಇರುತ್ತವೆ. ಅದಕ್ಕಾಗಿಎಲ್ಲ ಜಾತಿ ಧರ್ಮದವರು ಕೂಲಂಕಷವಾಗಿ ವಿಚಾರ ಮಾಡಿ ರಿಯಾಕ್ಟ ಮಾಡಬೇಕು ಎಂದರು. ಇನ್ನು ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಜಾರಕಿಹೊಳಿ, ರೇಣುಕಾಚಾರ್ಯಗೆ ಮಾಡೋಕೆ ಕೆಲಸ ಇಲ್ಲ. ಫೇಕ್ ಮಾಡೋರು ಬಿಜೆಪಿ IT ಸೆಲ್ ನವರು ಎಂದು ಆರೋಪಿಸಿದರು. ಇನ್ನು ಯಾರು ತಕ್ಷಣವೇ ರಿಯಾಕ್ಟ್ ಮಾಡಬಾರದು, ಸತ್ಯಾಂಶ ಕಂಡು ಹಿಡಿಯಬೇಕು ಎಂದರು.