ವಿಜಯಪುರ: ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ತಾಲ್ಲೂಕಿನ ಚಿರಲದಿನ್ನಿಯಲ್ಲಿ ನಡೆದಿದೆ.
ಮೂಲತಃ ಚಿಕ್ಕೋಡಿ ಪಟ್ಟಣದ ಜೋಡುಕುರಳಿ ಗ್ರಾಮದ ಭೀರಪ್ಪ ಬಡೆಗೋಳ, ಹಾಗೂ ಮಹೇಶ ಬಡೆಗೋಳ ಅಸುನೀಗಿರುವ ಕುರಿಗಾಯಿಗಾರರು. ಅಲ್ಲದೇ, ಸಿಡಿಲಿನ ಹೊಡೆತಕ್ಕೆ 9 ಕ್ಕೂ ಹೆಚ್ಚು ಕುರಿಗಳು ಸಹ ಅಸುನೀಗಿದ್ದಾವೆ. ಮಳೆ ಬರುವ ವೇಳೆಯಲ್ಲಿ ಕುರಿ ಮೇಯಿಸುವ ವೇಳೆಯಲ್ಲಿ ಸಿಡಿಲು ಬಡಿದು ಈ ಅವಘಡ ನಡೆದಿದೆ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.