ವಿಜಯಪುರ: ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರಿಬ್ಬರು ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ನಡೆದಿದೆ.
ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಅಜೀತ್ ಮಳೆಪ್ಪ ದಳವಾಯಿ (25) ನಾಪತ್ತೆಯಾಗಿದ್ದಾರೆ. ಇನ್ನು ನಾಪತ್ತೆಯಾಗಿರುವ ಮೀನುಗಾರ ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಳೂತಿ, ರೊಳ್ಳಿ, ನದಿ ದಂಡೆಗಳಲ್ಲಿ ಅಗ್ನಿ ಶಾಮಕ ದಳದಿಂದ ಹುಡುಕಾಟ ಮಾಡಿದ್ದಾರೆ. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.