ವಿಜಯಪುರ: ಭೀಮಾಶಂಕರ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗೆ ಪ್ರತಿ ವರ್ಷ ಹಣ ಕಟ್ಟಲಾಗುತ್ತಿದೆ. ರೈತರು ನೀಡುವ ಕಬ್ಬಿಗೆ ಕಾರ್ಖಾನೆಯಿಂದ ತಪ್ಪದೆ ಹಣ ಸಂದಾಯ ಮಾಡುತ್ತಿದೆ. ಆದ್ರೇ, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಕಾರ್ಖಾನೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದು ಖಂಡನೀಯ. ಇನ್ನು ಕಾರ್ಖಾನೆ ವ್ಯವಸ್ಥಾಪಕರು ಹಣಕಾಸಿನ ಅವ್ಯವಹಾರ ಮಾಡಿಲ್ಲ. ಇದು ಸತ್ಯಕ್ಕೆ ದೂರವಾಗಿದೆ ಎಂದರು. ಅಲ್ಲದೇ, ಕಾರ್ಖಾನೆ ವಿಷಯದಲ್ಲಿ ಆರೋಪ ಮಾಡಿದವರಿಗೆ ನೋಟೀಸ್ ನೀಡಲಾಗಿದೆ ಎಂದರು.