ಧಾರವಾಡ: ಆಸ್ತಿಗಾಗಿ ತಂದೆಯೊಂದಿಗೆ ಜಗಳ ಮಾಡುವ ವೇಳೆಯಲ್ಲಿ ಜಗಳ ಬಿಡಿಸಲು ಬಂದ್ ತಾಯಿಯನ್ನೇ ಬಡಿದು ಹತ್ಯೆಗೈದಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಬೆನ್ನೂರ ಗ್ರಾಮದ ಬಸವರಾಜ ಕಲ್ಲಪ್ಪ ಅಣ್ಣಿಗೇರಿ (45) ತನ್ನ ತಾಯಿ ಶಾಂತವ್ವಳನ್ನ ಬಡಿಗೆಯಿಂದ ಹಿಗ್ಗಾ ಮುಗ್ಗಾ ಥಳಿಸಿ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ತಂದೆ ಕಲ್ಲಪ್ಪನಿಗೂ ಗಾಯಗಳಾಗಿವೆ. ಎರಡೂವರೆ ಎಕರೆ ಜಮೀನು ತನ್ನ ಹೆಸರಿಗೆ ಹಚ್ಚಿದ್ದರು. ಮತ್ತೇ ಕ್ಯಾತೆ ತೆಗೆದು ಜಗಳ ಮಾಡಿರುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.