ವಿಜಯಪುರ: ಹುಚ್ಚು ಸಾಹಸಕ್ಕೆ ಕೈ ಹಾಕಿ ನೀರು ವ್ಯಕ್ತಿ ನೀರು ಪಾಲಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ.
ದ್ಯಾಬೇರಿ ಗ್ರಾಮದ ಪ್ರಕಾಶ್ ಮೋರೆ (45) ಸಾವನ್ನಪ್ಪಿದ ವ್ಯಕ್ತಿ. ಮಧ್ಯಾಹ್ನ ಪಾರ್ಟಿ ಮಾಡಿ ಮದ್ಯ ಸೇವಿಸಿ ಕೆರೆ ಬಳಿ ಬಂದಿದ್ದ ಪ್ರಕಾಶ ಹಾಗೂ ಸ್ನೇಹಿತರು. ಬಳಿಕ ಕೆರೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜಿ ದಡ ದಾಟಿದರೆ 20 ಸಾವಿರ ನೀಡೋದಾಗಿ ಸ್ನೇಹಿತರು ಬೆಟ್ಟಿಂಗ್ ಕಟ್ಟಿದ್ದರು. 20 ಸಾವಿರ ಬೆಟ್ಟಿಂಗ್ ಆಸೆಗಾಗಿ ನೀರಿಗೆ ಜಿಗಿದ್ದು ಪ್ರಕಾಶ್ ಮೋರೆ ಅಸುನೀಗಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.