ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಅಂದಾಜು 50 ಸಾವಿರ ಮೌಲ್ಯದ ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮರಗಳ್ಳತನದಲ್ಲಿ ತೊಡಗಿದ್ದ ಆರೋಪಿ ಮಹಾರಾಷ್ಟ್ರ ರಾಜ್ಯದ ಲಾಥೂರ ಜಿಲ್ಲೆ ನೀಲಂಗಾ ತಾಲೂಕಿನ ಸಿಂಧಖೇಡ ನಿವಾಸಿ ಚಾಂದ ಮಸ್ತಾನ ಶೇಖನ್ನು ಪೊಲೀಸರು ಬಂಸಿದ್ದಾರೆ. ಎರಡು ಮರಗಳನ್ನು ಆಧುನಿಕ ಸಲಕರಣೆ ಬಳಸಿ ಕಡಿದು ತುಂಡುಗಳನ್ನಾಗಿ ಮಾಡಿ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಆಲಮಟ್ಟಿ ಪೊಲೀಸರು ಪ್ರಕರಣ ದಾಖಲಾಗಿದೆ.