ವಿಜಯಪುರ: ಬಂಗಾರ ಅಂಗಡಿಗಳ, ಮನೆ ಸರಣಿ ಕಳ್ಳತನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.
ರಾಜು ಪತ್ತಾರ ಎಂಬವರ ಬಂಗಾರದ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿನ 40 ಸಾವಿರ ನಗದು ಸೇರಿ 5 ಲಕ್ಷ ರೂ.ಗಳ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ, ಸದಾಶಿವ ಸಿಂಗೆ ಎಂಬವರ ಮನೆಯಲ್ಲಿನ ತಿಜೋರಿ ಬೀಗ ಮುರಿದು 8 ಸಾವಿರ ನಗದನ್ನು ಕಳ್ಳರು ಕಳ್ಳತನ ಮಾಡಿದ್ದು, ಜಾಕೀರ್ ಎಂಬವರ ಬಳೆ ಅಂಗಡಿಯ ಬೀಗ ಮುರಿದು ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.