ವಿಜಯಪುರ: ಕರ್ನಾಟಕ ಜನಚೈತನ್ಯ ಯಾತ್ರೆಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಏಪ್ರಿಲ್ 24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಡಬ್ಲ್ಯೂಪಿಐ ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಗಮಿಸಲಿದ್ದಾರೆ ಎಂದರು. ಅಲ್ಲದೇ, ಏಪ್ರಿಲ್ 24 ರಿಂದ ಮೇ 21 ವರೆಗೂ 11 ಜಿಲ್ಲಾದ್ಯಂತ ಮೆರವಣಿಗೆ ನಡೆಸಿ, ಮೇ 21 ರಂದು ತುಮಕೂರಿನಲ್ಲಿ ಬೃಹತ್ ಜನಚೈತನ್ಯ ಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.