ವಿಜಯಪುರ: ಫರ್ನಿಚರ್ ವರ್ಕ್ಸ್ ಶಾಪ್ ಗಳಲ್ಲಿ
ಆಕಸ್ಮಿಕ ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಹಾಗೂ ಬೆಲೆ ಬಾಳೋ ಸಾಗವಾನಿ ಕಟ್ಟಿಗೆ ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
ಐದು ಪರ್ನಿಚರ್ ವರ್ಕ್ಸ್ ಶಾಪ್ ಗಳಲ್ಲಿನ ಸಿಎನ್ಸಿ ರೂಟರ್ ಹಾಗೂ ಇತರ ಯಂತ್ರಗಳು ಭಸ್ಮವಾಗಿದೆ.
ಸುಮಾರು ಒಂದು ಕೋಟಿ ಬೆಲೆ ಬಾಳುವ ಯಂತ್ರಗಳು ಹಾಗೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ಹಾನಿಯಾಗಿದೆ. ಶಾಂತಪ್ಪ ಬಡಿಗೇರ, ಬಸವರಾಜ ಬಡಿಗೇರ, ಸಂಗು ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಸಂತೋಷ ಬಡಿಗೇರ ಎಂಬುವವರಿಗೆ ಸೇರಿದ ಐದು ಅಂಗಡಿಗಳು. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.