ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಮತ್ತೆ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ.
ನಿನ್ನೆ ಸಂಜೆ 7.57 ಕ್ಕೆ ಭೂಕಂಪನದ ಅನುಭವವಾಗಿದೆ.ಭೂಮಿಯಿಂದ ಜೋರಾದ ಶಬ್ದದ ಜೊತೆಗೆ ಭೂಮಿ ಕಂಪನವಾಗಿದೆ ಎಂದು ಗ್ರಾಮಸ್ಥರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ತಾಲೂಕಿನ ಹುಬನೂರ, ಟಕ್ಕಳಕಿ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಜಾಲಗೇರಿ, ಇಟ್ಟಂಗಿಹಾಳ ಗ್ರಾಮಗಳಲ್ಲಿ ಈ ಅನುಭವಾಗಿದೆ.
ಭೂಮಿಯಿಂದ ಬಂದ ಭಾರೀ ಸದ್ದಿನಿಂದಾಗಿ ಬಹುತೇಕ ಕುಟುಂಬ ಸದಸ್ಯರು ಗಾಬರಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.