ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿಢೀರ್ ರಾಜಕೀಯ ಬದಲಾವಣೆ ಆಗಿರುವ ಮಾತುಗಳು ಕೇಳಿ ಬಂದಿವೆ. ವಿರೋಧಿ ಬಣವನ್ನು ಶಾಸಕ ಜಿ.ಟಿ.ದೇವೇಗೌಡ ಛಿದ್ರಗೊಳಿಸಿದ್ದಾರೆ.
ಜಿಟಿಡಿ ವಿರೋಧಿಸಿದ್ದ ಪಂಚಪಾಂಡವರಲ್ಲಿ ಒಡಕು ಆಗಿದ್ದು, ವಿರೋಧಿ ಬಣದ ಒಬ್ಬರನ್ನು ತನ್ನತ್ತ ಸೆಳೆಯುವಲ್ಲಿ ಶಾಸಕ ಜಿಟಿಡಿ ಯಶಸ್ವಿಯಾಗಿದ್ದಾರೆ.
ಕಳೆದ ರಾತ್ರಿ ನಡೆದ ಮಾತುಕತೆಯಲ್ಲಿ ಜಿಟಿಡಿಗೆ ಬೆಳವಾಡಿ ಶಿವಮೂರ್ತಿ ಜೈ ಎಂದಿದ್ದಾರೆ. ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಜಿಟಿಡಿ ಜತೆ ವೇದಿಕೆಯನ್ನು ಶಿವಮೂರ್ತಿ ಹಂಚಿಕೊಂಡಿದ್ದರು. ವಿರೋಧಿ ಬಣ ಕಾಂಗ್ರೆಸ್ ಸೇರುವ ಬಗ್ಗೆ ನಿರ್ಧರಿಸಿತ್ತು. ನಾನು ವಿರೋಧಿ ಬಣಕ್ಕೆ ಹೋಗುವುದಿಲ್ಲ , ಕಾಂಗ್ರೆಸ್ ಪಕ್ಷ ಸೇರುವುದಿಲ್ಲ.
ಮುಂದಿನ ಚುನಾವಣೆಯಲ್ಲಿ ಜಿಟಿಡಿ ಪರ ಕೆಲಸ ಮಾಡಿ ಗೆಲ್ಲಿಸುತ್ತೇನೆ ಎಂದು ಬಹಿರಂಗ ಸಮಾರಂಭದಲ್ಲಿ ವಿರೋಧಿ ಬಣದ ಸ್ನೇಹಿತರಿಗೆ ಶಿವಮೂರ್ತಿ ಸವಾಲು ಹಾಕಿದ್ದಾರೆ.