ಕರ್ನಾಟಕ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರ ಹಿನ್ನೆಲೆ ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಇನ್ನೂ ಗ್ರಾಮ ಪಂಚಾಯತಿಯಲ್ಲಿ ಠರಾವ್ ಪಾಸ್ ಮಾಡಿ ಡಿಸಿಗೆ ಸೋಲಾಪುರ ಜಿಲ್ಲಾಧಿಕಾರಿಗಳಿಗೆ ಠರಾವು ಕಾಪಿ ಸಲ್ಲಿಸಿ ಅಕ್ಕಲಕೋಟ ತಾಲೂಕಿನ ಹಳ್ಳಿಯ ಜನರು ಮನವಿ ಮಾಡಿಕೊಂಡರು.
ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್ ಮಂಗರುಳ, ಕೋರ್ಸೆಗಾಂವ ಸೇರಿದಂತೆ ಹಲವು ಹಳ್ಳಿಯ ಜನರು ಡಿಸಿ ಮನವಿ ನೀಡಿದ್ದಾರೆ.