ವಿಜಯಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಅಕ್ರಮ ಪ್ರವೇಶಗೈದು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
34 ವರ್ಷದ ಮಹಾದೇವಿ ಲಕ್ಷ್ಮಣ ತಿಳಗುಳ ಎಂಬುವರ ಮೇಲೆ ಕೃತ್ಯ ನಡೆದಿದೆ.
ಗ್ರಾಮದ ಬಸವರಾಜ ಭೀಮರಾಯ ತಿಳಗೂಳ ಕೃತ್ಯ ಎಸಗಿದ ಆರೋಪಿ.
ಮಹಾದೇವಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ ಬಸವರಾಜ ಅವಳನ್ನು ತಬ್ಬಿಕೊಂಡು ಬಾಯಲ್ಲಿ ಟವೆಲ್ ತುರುಕಿ ಬಲಾತ್ಕಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮಹಾದೇವಿಯ ಮೈದುನನ ಹೆಂಡತಿ ಲಕ್ಷ್ಮಿ ಮನೆಗೆ ಬಂದಿದ್ದಾಳೆ. ಆಗ ಆರೋಪಿ ಓಡಿ ಹೋಗಿದ್ದಾನೆ. ಬಳಿಕ ಮಹಾದೇವಿ ಹಾಗೂ ಆಕೆ ಗಂಡ ಲಕ್ಷ್ಮಣ ಬಸವರಾಜನ ಮನೆಗೆ ಹೋಗಿ ವಿಚಾರಿಸಿದಾಗ ಬಸವರಾಜನ ಮನೆಯವರಾದ ಸರಸ್ವತಿ, ಸಂತೋಷ, ರೇಣುಕಾ, ಮಂಜುನಾಥ, ಹಣಮಂತ, ಗೌರಪ್ಪ ಸೇರಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕಲಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.