ವಿಜಯಪುರ: ಕಾಲುವೆಯಲ್ಲಿ ಹರಿದು ಹೋಗಿದ್ದ ಮತ್ತೋರ್ವನ ಶವ ಪತ್ತೆಯಾಗಿರುವ ಘಟನೆ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ನಡೆದಿದೆ.
45 ವರ್ಷದ ಅಶೋಕ ಅಂಗಡಿಗೇರಿಯ ಶವ ಪತ್ತೆಯಾಗಿದೆ. ಬೆಳಗ್ಗೆ ಶೇಖಪ್ಪನ ಶವ ಸಿಕ್ಕಿತ್ತು. ಕಾಲುವೆಯಲ್ಲಿ ಕೆಲಸ ಮಾಡುವಾಗ ನೀರಿನ ಇಳಿಜಾರಿಗೆ ಕಾಲು ಜಾರಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.