ಹಾವೇರಿ: ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರುಗಳಿಗೆ ಮಾತ್ರ ಸೀಮಿತವಾಗಿದ್ದ ರೇಸಾರ್ಟ್ ರಾಜಕಾರಣ ಇದೀಗ್ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಬಂದು ನಿಂತಿದೆ.
ಬೆಂಗಳೂರಿನ ರೆಸಾರ್ಟ್ನಲ್ಲಿ 40 ದಿನ ಗ್ರಾಮ ಪಂಚಾಯಿತಿ ಸದಸ್ಯರು ವಾಸ್ತವ್ಯ ಹೂಡಿದ್ದಾರೆ. ಗ್ರಾಪಂ ಅಧ್ಯಕ್ಷರನ್ನು ಕೆಳಗಿಳಿಸಲು ವಿಮಾನದಲ್ಲಿ ಗ್ರಾಪಂ ಸದಸ್ಯರು ಬಂದಿದ್ದಾರೆ.
ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯ ಒಟ್ಟು 13 ಸದಸ್ಯರನ್ನು ಒಳಗೊಂಡಿದ್ದು, ಹಾಲಿ ಅಧ್ಯಕ್ಷರಾಗಿದ್ದ ಮಾಲತೇಶ ದುರಗಪ್ಪ ನಾಯರ್ ತಮ್ಮ ಅಧ್ಯಕ್ಷರ ಆಡಳಿತಾವಧಿಯಲ್ಲಿ 15 ತಿಂಗಳು ಅಧಿಕಾರ ನಡೆಸುವುದಾಗಿ ಹೇಳಿದ್ದು, 15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದಾಗಿ ಪ್ರಮಾಣ ಮಾಡಿದ್ದರು. ಆದರೆ ಇದೀಗ 15 ತಿಂಗಳಾದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತೇಶ್ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದ್ದ ಒಟ್ಟು 13 ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 9 ಸದಸ್ಯರು ಸಂತೋಷ್ ಭಟ್ ಗುರೂಜಿ ಬಣದವರು, ಇನ್ನುಳಿದ ನಾಲ್ವರು ಬಿಜೆಪಿ ಸದಸ್ಯರಾಗಿದ್ದಾರೆ.