ವಿಜಯಪುರ: ಗುಜರಾತ ಚುನಾವಣೆ ಬಗ್ಗೆ ನಡೆದಿರುವ ಸಮೀಕ್ಷೆಯಂತೆ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಬುಧವಾರ ಮಾಧ್ಯಮದ ಎದುರು ಮಾತನಾಡಿದ ಅವರು, ಇದೇ ರೀತಿ ಮುಂದೆ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಪಿಎಂ ಮೋದಿ ನೇತ್ವತೃದಲ್ಲಿ ನಡೆಸಿ 130-40ಸ್ಥಾನಗಳಿಸಿ ಬಹುಮತ ಸಾಧಿಸಲಿದ್ದೇವೆ. ಅವರು ಅವಧಿ ಮುನ್ನ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದರು.
ರಾಜ್ಯದ ಪ್ರತಿ ಮತಕ್ಷೇತ್ರದ ಶಾಸಕರ ರಿಪೋರ್ಟ್ ಕಾರ್ಡ್ ಮೋದಿ ಬಳಿ ಇವೆ. ಹೈಕಮಾಂಡ್ ಸಹ ತನ್ನದೇ ಆದ ಸಮೀಕ್ಷೆ ನಡೆಸಿದೆ. ಹೊಸ ಮುಖಗಳಿಗೆ ಅವಕಾಶ ನೀಡಬಯಸಿದರೆ ಅವರ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಶಾಸಕರು ಬದ್ಧರಾಗಿರುತ್ತೇವೆ ಎಂದರು.
ರಾಜ್ಯದಲ್ಲಿ ಚುನಾವಣೆ ಜ್ವರ ಆರಂಭಗೊಂಡಿದ್ದ ಕಾರಣ ಕೆಲವರು ಕ್ಷೇತ್ರ ಬದಲಿಸುವದು, ಹೊಸ ಪಕ್ಷ ಕಟ್ಟುವ ಹೇಳಿಕೆ ನೀಡುವದು ಸಾಮಾನ್ಯ ಇವೆಲ್ಲ ಪೇಮಂಟ್ ಗೆ ಹೂಡುವ ತಂತ್ರಗಾರಿಕೆ ಅಷ್ಟೇ ಎಂದರು.
ನಮ್ಮ ಜಿಲ್ಲೆಯಲ್ಲಿ ಒಬ್ಬರಿದ್ದಾರೆ. ಚುನಾವಣೆ ಬಂದಾಗ ಕ್ಷೇತ್ರ ಬದಲಿಸುವೆ, ಇದು ನನ್ನ ಸ್ವಂತ ಕ್ಷೇತ್ರ ಎಂಬೆಲ್ಲ ಹೇಳಿಕೆ ನೀಡುತ್ತಲೇ ಇರುತ್ತಾರೆ. ಇವೆಲ್ಲ ಹಣಕ್ಕಾಗಿ ನೀಡುವ ಹೇಳಿಕೆಯಾಗಿದೆ. ಶಾಸಕ ಎಂ.ಬಿ.ಪಾಟೀಲರು ಹಾಕಿಕೊಟ್ಟ ಕೆಟ್ಟ ಚಟವಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳಬಾರದು ಎಂದರು.