ವಿಜಯಪುರ: ಇಂದು ಗಡಿಯಲ್ಲಿ ನೆಲ, ಭಾಷೆ ಕುರಿತು ಕಲಹ ನಡೆಯುತ್ತಿರುವುದು ನಿಜಕ್ಕೂ ದುಃಖಕರ ಎಂದು ಎಂದು ಸೊಲ್ಲಾಪುರದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಂದನಾ ಪುರೋಹಿತ ವಿಷಾದಿಸಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೊಲ್ಲಾಪುರ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಜೊತೆಗೆ ಹಮ್ಮಿಕೊಂಡ `ವಿದ್ಯಾರ್ಥಿ ಮತ್ತು ಬೋಧಕ ವರ್ಗ ವಿನಿಮಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವೆಲ್ಲ ಒಂದೇ ದೇಶದ ಪ್ರಜೆಗಳು, ಸಹಕಾರ, ಸಹೋದರ ಭಾವದೊಂದಿಗೆ ಜೀವನ ಸಾಗಿಸಬೇಕು, ರಾಜ್ಯರಾಜ್ಯಗಳ ಮಧ್ಯೆ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜ್ಞಾನದಜೊತೆ ಪರಸ್ಪರ ಸದ್ಭಾವನೆಯನ್ನು ಮೂಡಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೋ. ಎಸ್. ಜಿ. ರೊಡಗಿ ಮಾತನಾಡಿ, ಕಾಲೇಜುಕಾಲೇಜುಗಳ ಮಧ್ಯೆ ವಿವಿಧಉಪನ್ಯಾಸ ಕಾರ್ಯಾಗಾರ, ಸಾಂಸ್ಕøತಿಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಶೈಕ್ಷಣಿಕ ಪ್ರಗತಿ ಹಾಗೂ ಪರಸ್ಪರ ಸೌಹಾರ್ದತೆಯನ್ನು ಮೂಡಿಸಲು ಸಾಧ್ಯ. ಗಡಿ ನಾಡುಗಳಲ್ಲಿಯ ನಡೆಯುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಬೇಕು ಎಂದರು.
ಸೌಹಾರ್ಧತೆಯ ಪ್ರತೀಕವಾಗಿ ಎ. ಎಸ್. ಪಾಟೀಲ ಮಹಾವಿದ್ಯಾಲಯದ ಪ್ರಾಧ್ಯಾಪಕರು ಸೊಲ್ಲಾಪುರ ಸಂಗಮೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷಉಪನ್ಯಾಸ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಕ್ತಿ ಮಹೀಂದ್ರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಐಶ್ವರ್ಯ ಮಿರಜಕರ ನಿರೂಪಿಸದರು. ಡಾ. ಭಾರತಿ ಮಠ ವಂದಿಸಿದರು