ವಿಜಯಪುರ: ಶಾದಿ.ಕಾಮ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯಿಂದ ಯುವತಿಯೊಬ್ಬಳು ಬರೋಬ್ಬರಿ ಐದು ಲಕ್ಷ ಹಣ ಕಳೆದುಕೊಂಡಿರುವ ಘಟನೆ ವಿಜಯಪುರ ನಗರದ ಶಕ್ತಿ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಭುವನೇಶ್ವರಿ ಸದಾಶಿವ ನಾದ ಮೋಸ ಹೋಗಿರುವ ಯುವತಿ.
ಘಟನೆ ವಿವರ…
ಶಾದಿ.ಕಾಮ್ನಲ್ಲಿ ಮದುವೆಗಾಗಿ ಬಯೋಡಾಟಾವನ್ನು ಭುವನೇಶ್ವರಿ ಅಪ್ಲೋಡ್ ಮಾಡಿದ್ದಾಳೆ. ಇದಾದ್ ಬಳಿಕ ಭುವನೇಶ್ವರಿಗೆ ವಾಟ್ಸ್ಆಫ್ ಮೂಲಕ ಹೆಂಡ್ರಿಕ್ ಎಂದು ಮೇಸಜ್ ಬಂದಿದೆ. ಇದಾದ್ ನಂತರ ದಿನನಿತ್ಯ ಇಬ್ಬರು ಮಧ್ಯೆ ಚಾಟಿಂಗ್ ನಡೆದಿದೆ.
ಇನ್ನು ಯುಎಸ್ಎನಿಂದ ಮುಂಬೈಗೆ ಹೆಂಡ್ರಿಗ್ ಬಂದಿದ್ದಾರೆ. ಆದ್ರೇ, ಅತೀ ಹೆಚ್ಚು ಡಾಲರ್ ತಂದಿದ್ದು, ಇದು ಕಾನೂನು ಪ್ರಕಾರ ಅಪರಾಧ ಎಂದು ಭುವನೇಶ್ವರಿಯಿಂದ 50 ಸಾವಿರದಂತೆ ಹೀಗೆ 40, 50 ಸಾವಿರ ಹಾರಿಸಿಕೊಂಡು ಬರೋಬ್ಬರಿ 5.15 ಲಕ್ಷ ನಗದು ವಂಚನೆ ಮಾಡಿದ್ದಾನೆ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.