ವಿಜಯಪುರ: ಚಳಿಗೆ ವೃದ್ಧ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ಭೀಮಪ್ಪ ಹಾದಿಮನಿ (75) ಸಾವನ್ನಪ್ಪಿದ ವೃದ್ಧ.
ಪಟ್ಟಣದ ನೇತಾಜಿ ನಗರ ನಿವಾಸಿ ಭೀಮಪ್ಪನ ಶವ ನವರತ್ನ ಬಾರ್ ಎದುರು ಪತ್ತೆಯಾಗಿದೆ. ಕೈ ಮುಷ್ಟಿ ಮಾಡಿ ಹಿಡಿದು ಬೊರಲು ಬಿದ್ದು ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.