ವಿಜಯಪುರ: ವಚನಗಳನ್ನು ಸಂರಕ್ಷಿಸುವ ಕೆಲಸ ಆಗಬೇಕು ಎಂದು ಬಸವ ಸೆಂಟರ್ ಆಫ್ ನಾರ್ಥ್ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀಶೈಲ್ ಹಾದಿಮನಿ ಹೇಳಿದರು.
ವಿಜಯಪುರ ನಗರದ ಸಿದ್ಧೇಶ್ವರ ಆಶ್ರಮದಲ್ಲಿ ಶನಿವಾರ ಶ್ರೀ ಬಸವೇಶ್ವರರ ಷಟ್ಸ್ಥಲ ವಚನಗಳನ್ನು ಶ್ರೀ ಸಿದ್ಧೇಶ್ವರ ಶ್ರೀಗಳು ಬಿಡುಗಡೆಗೊಳಿಸಿದರು.
ಈ ವೇಳೆ ಶ್ರೀಶೈಲ್ ಮಾತನಾಡಿ, ಆಧುನಿಕ ಕಾಲದ ವಚನಗಳನ್ನು ಸಂರಕ್ಷಣೆ ಮಾಡುವ ಕೆಲಸಗಳನ್ನು ಮಾಡಬೇಕು. ಅಂದಾಗ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬಹುದು ಎಂದರು.
ಅಲ್ಲದೇ, ಹಳೆ ಕನ್ನಡ ಶ್ರೀ ಬಸವೇಶ್ವರರ ಷಟ್ಸ್ಥಲ ವಚನಗಳನ್ನು ಹೊಸ ಕನ್ನಡಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಅದಕ್ಕಾಗಿ ವಚನಗಳನ್ನು ಸಂರಕ್ಷಣೆ ಆಗಬೇಕು ಎಂದು ಮನವಿ ಮಾಡಿದರು.