ಬೆಳಗಾವಿ: ಬ್ಯಾಟರಿ ಚಾರ್ಜ್ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಮನೆಯ ಛಾವಣಿ ಸೇರಿದಂತೆ ಮನೆ ಬೆಂಕಿಗಾಹುತಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಭೂರುನಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಮಾಪೂರ ಗ್ರಾಮದಲ್ಲಿ ನಡೆದಿದೆ.
ಮನಸ್ಸೂರ ಭಯಭೇರಿ ಎಂಬುವರ ಮನೆ ಬೆಂಕಿಗಾಹುತಿ ಆಗಿದೆ. ಇನ್ನು ಆಕಸ್ಮಿಕ ಬೆಂಕಿ ಸಂಭವಿಸಿ ಮನೆಯ ಛಾವಣಿ ಸೇರಿದಂತೆ ಸಂಪೂರ್ಣ ಮನೆ ಹಾನಿಯಾಗಿದೆ.
ಘಟನೆ ವಿವಿರ..
ಮನಸ್ಸೂರ ಎಂಬಾತ ಮನೆಯಲ್ಲಿ ಬ್ಯಾಟರಿ ರಿಪೇರಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಈ ಸಂದರ್ಭದಲ್ಲಿ ಬ್ಯಾಟರಿ ಚಾರ್ಜ್ನಿಂದ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಬ್ಯಾಟರಿಗಳಿಗೆ ವಿದ್ಯುತ್ ಸ್ಪರ್ಶ ಕೊಂಡು ಈ ಅವಘಡ ಎಂದು ಅಂದಾಜಿಸಲಾಗಿದೆ.
ಮನ್ಸೂರ್ ಭಯಬೇರಿ ಅವರಿಗೆ ಸಂಬಂಧಪಟ್ಟ ಇಲಾಖೆಯಿಂಸ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕೆಂದು ರಾಮಾಪುರದ ಸಾರ್ವಜನಿಕರು ಮನವಿ ಮಾಡಿದ್ದಾರೆ.