ಬೀದರ್: ಕಾರಂಜಾ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಬಳಿ ನಡೆದಿದೆ.
ಕಾರಂಜಾ ಕಾಲುವೆಯಲ್ಲಿ ಈಜಲು ಇಬ್ಬರು ವಿದ್ಯಾರ್ಥಿಗಳಾದ ಸಾಯಿಕುಮಾರ(17) ಹಾಗೂ ಬಸವರಾಜ (15) ನೀರು ಪಾಲಾಗಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವಿದ್ಯಾರ್ಥಿಗಳಾದ ಸಾಯಿಕುಮಾರ ಕಣಜಿ ಹಾಗೂ ಬಸವರಾಜ ಕಟ್ಟಿತೂಗಾಂವ ಗ್ರಾಮಸ್ಥರಾಗಿದ್ದಾರೆ. ಸ್ಥಳಕ್ಕೆ ಧನ್ನೂರಾ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.